ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ವಿಧಾನ . New Ration Card Application Karnataka 2023 -
ನಮಸ್ಕಾರ ಸ್ನೇಹಿತರೆ, ಹೊಸ ರೇಷನ್ ಕಾರ್ಡ್ / ಹೊಸ ಪಡಿತರ ಚೀಟಿ ಅದು ಬಿ.ಪಿ.ಲ್ ರೇಷನ್ ಆಗಿರಬಹುದು, ಎ.ಪಿ.ಲ್ ರೇಷನ್ ಕಾರ್ಡ್ ಆಗಿರಬಹದು , ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ.. ? ಅಂಥ ಸಂಪೂರ್ಣ ಮಾಹಿತಿ ತಿಳಿಯೋಣ . ಅದರ ಜೊತೆಗೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಏನು.? ಅಹ್ರತೆ ಏನು .? ಎಂದು ತಿಳಿಯೋಣ ಬನ್ನಿ.
ಬಿಪಿಲ್ ಅಥವಾ ಎಪಿಲ್ ಅಥವಾ ಅ.ಅ.ವೈ ಪಡಿತರ ಚೀಟಿಗಳು ಬಹಳ ಮುಖ್ಯವಾಗಿದ್ದು . ರೇಷನ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಸಿಗುವ ಲಾಭಗಳು ಬಹಳಷ್ಟು ಇದಾವೆ. ಕರ್ನಾಟಕ ರಾಜ್ಯದಲ್ಲಿ ಬಡತನ ರೇಖೆಗಿನ ಕೆಳಗೆ ಇರುವ ಕುಟುಂಬ ಗಳು ರೇಷನ್ ಕಾರ್ಡ್ ಹೊಂದಿದರೆ ಒಳ್ಳೆಯದು. ಮೊದಲನೇದಾಗಿ ಅವರಿಗೆ ಅನ್ನಭಾಗ್ಯ ಯೋಜನೆಯಡಿ ತಿಂಗಳಿಗೆ ೧೦ಕೆಜಿ ಅಕ್ಕಿ ನೀಡಲಾಗುತ್ತದೆ. ಹಾಗೆ ರೇಷನ್ ಕಾರ್ಡ್ ಕೂಡ ಒಂದು ವಿಳಾಸ ರೂಪದಲ್ಲಿ ಉಪಯೋಗಿಸಬಹುದು.
- BPL Ration Card / PHH ( Below Poverty Line ) - ಬಿ.ಪಿ.ಲ್ ಪಡಿತರ ಚೀಟಿ.
- APL Ration Card / APL ( Above Poverty Line) - ಎ. ಪಿ.ಲ್ ಪಡಿತರ ಚೀಟಿ.
- AAY Ration Card / AAY ( Antodaya Anna Yojana) - ಅಂತೋದಯ ಅನ್ನ ಯೋಜನೆ.
* ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು :
- ಆಧಾರ್ ಕಾರ್ಡ್ ಪ್ರತಿ ( ಕಡ್ಡಾಯವಾಗಿ ಬೇಕಾಗಿರುವ ದಾಖಲಾತಿ )
- ಆಧಾಯ ಮತ್ತು ಜಾತಿ ಪ್ರಮಾಣ ಪತ್ರ
- ಜನ ಪ್ರಮಾಣ ಪತ್ರ ( 6 ವರ್ಷ ಒಳಗಿನ ಮಕ್ಕಳು ಇದ್ದಾರೆ ಮಾತ್ರ )
ಹಂತ 1 : ಆನ್ಲೈನ್ ನಲ್ಲಿ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕು ಬಯಸುವವರು ಸರ್ಕಾರದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕಾಗುತ್ತೆ . ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ವೆಬ್ ಸೈಟ್ ಅನ್ನು ಓಪನ್ ಮಾಡ್ಕೊಳ್ಳಿ
ಹಂತ 2 : ನಂತರ ಅಲ್ಲಿ ಇ-ಸೇವೆಗಳು ಟ್ಯಾಬ್ ಅನ್ನು ಕ್ಲಿಕ್ ಮಾಡಿ
ಹಂತ 3 : ನಂತರ ಇ ಪಡಿತರ ಚೀಟಿ ಅನ್ನುವ ಒಪ್ಶನ್ ಮೇಲೆ ಕ್ಲಿಕ್ ಮಾಡಿ . ಅಲ್ಲಿ ಹೊಸ ಪಡಿತರ ಚೀಟಿ ಅಂಥ ಒಪ್ಶನ್ ಕಾಣುತ್ತೆ ಅದರ ಮೇಲೆ ಕ್ಲಿಕ್ ಮಾಡಿ .ಆಮೇಲೆ ಅಲಿ ನಿಮಗೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅಪ್ಲಿಕೇಶನ್ ಓಪನ್ ಆಗುತ್ತೆ .
ಹಂತ 4 : ಆಧಾರ್ ಕಾರ್ಡ್ ಲಿಂಕ್ ಇರುವ ಮೊಬೈಲ್ ನುಂನೇರ್ ಗೆ ಒಟಿಪಿ ಬಂದಿರುತ್ತೆ ಅದು ಹಾಕಿ .ಆಮೇಲೆ ಬಯೊಮೀಟ್ರಿಕ್ ಕೊಡಿ. ADD ಮಾಡಿ
ಹಂತ 5 : ಉಳಿದ ಸದಸ್ಯರು ADD ಮಾಡಿ ಆಮೇಲೆ ಫಿಂಗರ್ಪ್ರಿಂಟ್ ಕೊಟ್ಟು ADD ಮಾಡಿ. ನಂತರ ಫ್ಯಾಮಿಲಿ ಹೆಡ್ ಅನ್ನು ಸೆಲೆಕ್ಟ್ ಮಾಡಿ
ಹಂತ 6 : ಎಲ್ಲಾ ಸದಸ್ಯರು ಸೇರಿಸಿದ ಮೇಲೆ ಕೊನೇಯದಾಗಿ ವಿಳಾಸವನ್ನು ನಮೂದಿಸಿ ಆಮೇಲೆ ಕೊನೆಯಲ್ಲಿ ಅರ್ಜಿಯನ್ನು ಸಲ್ಲಿಸಿ.
ದಯವಿಟ್ಟು ಸಂಪೂರ್ಣವಾಗಿ ನೋಡಿ ನಿಮಗೆ ಏನಾದರೂ ತೊಂದರೆ ಆದರೆ ಕೆಳಗಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಸಂಪೂರ್ಣವಾಗಿ ವಿಡಿಯೋ ಒಮ್ಮೆ ನೋಡಿ
ನಿಮಗೆ ಸ್ಟೆಪ್ ಬೈ ಸ್ಟೆಪ್ ಬೇಕು ಅಂದರೆ ಸಂಪೂರ್ಣವಾಗಿ ಇದನ್ನೊಮ್ಮೆ ನೋಡಿ
Thans you........💓💓
----------------------------------------------------------------------------------------------------------------------------------
- ಹಾಗೆ ನಮ್ಮ ಯುಟ್ಯೂಬ್ ಚಾನೆಲ್ ಫೇಸ್ಬುಕ್ ಟ್ವಿಟ್ಟರ್ ಇನ್ ವೆಬ್ ಸೈಟ್ ಗೆ ಭೇಟಿ ನೀಡಿ-------------------------------------------------------------------------------------------------------------------------ದಯವಿಟ್ಟು ಗಮನಿಸಿ: ಸಾರ್ವಜನಿಕ ಸೇವಾ ಯೋಜನೆಗಳು ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಹಾಕುತ್ತಿಲ್ಲ.**** ಲೇಖನ ಮುಕ್ತಾಯ ****ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲುನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆಸಬ್ ಸ್ಕ್ರೈಬ್ ಆಗಲು, Youtubeಲಿಂಕ್ ಮೇಲೆ ಕ್ಲಿಕ್ ಮಾಡಿ
#kannadanews
#publicservicescheme#ಗೃಹಲಕ್ಷ್ಮಿ https://www.blogger.com/blog/post/edit/962716105203786960/1335137785122628033#kannadavide#




No comments: