APL ಕಾರ್ಡ್ ಅನ್ನು BPL ಕಾರ್ಡ್ ಗೆ ವರ್ಗಾವಣೆ ಮಾಡುವುದು ಹೇಗೆ?
ಎಲ್ಲಾ ನಮ್ಮ ಸಾರ್ವಜನಿಕರಿಗೆ ನಮ್ಮ ಸಾರ್ವಜನಿಕ ಸೇವಾ ಯೋಜನೆಯ ಕಡೆಯಿಂದ ಇವತ್ತಿನ ಶುಭೋದಯ ಆರಂಭ ಮಾಡೋಣ ಬನ್ನಿ.
ಈಗ ನಿಮ್ಮ ಹತ್ತಿರ ಎಪಿಎಲ್ ಕಾರ್ಡ್ ಇದ್ದರೆ ನೀವು ಅದನ್ನು ಬಿಪಿಎಲ್ ಗೆ ವರ್ಗಾಯಿಸಬೇಕಾದರೆ ಮೊದಲು ಈ ನಿಯಮಗಳನ್ನು ನೀವು ಪಾಲಿಸಬೇಕಾಗುತ್ತದೆ. ನಿಯಮಗಳು ಅಂದರೆ ಮೊದಲು ನೀವು ನಿಮ್ಮ ಮನೆಯಲ್ಲಿ ಯಾರಾದರೂ ಸರಕಾರಿ ನೌಕರಿಯಲ್ಲಿದ್ದರೆ. ಅಂದರೆ ನಿಮ್ಮ ಕುಟುಂಬದ ಒಂದು ರೇಷನ್ ಕಾಡಿನ ಒಳಗಡೆ ಸರ್ಕಾರಿ ನೌಕರಿಯಲ್ಲಿದ್ದವರಿಗೆ ಈ ಬಿಪಿಎಲ್ ಕಾರ್ಡ್ ಸಿಗೋದಿಲ್ಲ ಇದನ್ನ ಯಾವ ರೀತಿಯಾಗಿ ಚೇಂಜ್ ಮಾಡಿಸಬೇಕು ಎಂದರೆ.
ಮೊದಲು ಅವರ ಹೆಸರನ್ನು ತಮ್ಮ ರೇಷನ್ ಕಾರ್ಡ್ನಿಂದ ತಗಿಸಬೇಕಾಗುತ್ತದೆ ತಿದ್ದುಪಡಿ ಮಾಡಿಸಬೇಕಾಗುತ್ತದೆ ಅದಾದ ನಂತರ ನಿಮ್ಮ ರೇಷನ್ ಕಾರ್ಡನ್ನು ಡಿಲೀಟ್ ಮಾಡಿಸಿ ಮತ್ತೊಮ್ಮೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಅರ್ಜಿಯನ್ನ ಸಲ್ಲಿಸುವಾಗ ಯಾವುದೇ ರೀತಿಯಾಗಿ ಸರ್ಕಾರಿ ನೌಕರರು ಇರುವಂತಹ ವ್ಯಕ್ತಿಯನ್ನು ನಿಮ್ಮ ಕುಟುಂಬದ ಸದಸ್ಯರನ್ನು ಸೇರಿಸುವಂತಿಲ್ಲ ಸೇರಿಸಿದರೆ ಮತ್ತೆ ಎಪಿಎಲ್ ಕಾರ್ಡಿಗೆ ಸೇರ್ಪಡೆಯಾಗುತ್ತದೆ ಹಾಗಾಗಿ ನೀವು ಬಿಪಿಎಲ್ ರೇಷನ್ ಕಾರ್ಡ್ ಅರ್ಜಿಯನ್ನು ಸಲ್ಲಿಸುವಾಗ ಯಾವುದೇ ಒಬ್ಬ ಸದಸ್ಯರು ಕೂಡ ಸರ್ಕಾರಿ ನೌಕರಿಯಲ್ಲಿ ಇರಬಾರದು ಮತ್ತು ಜಿಎಸ್ಟಿಯನ್ನು ಕಟ್ಟುತ್ತಿರಬಾರದು ಅಂತವರಿಗೆ ಮಾತ್ರ ಈ ಸೌಲಭ್ಯ ದೊರಕುತ್ತೆ.
ಬಿಪಿಎಲ್ ಪಡಿತರ ಚೀಟಿ ಅರ್ಜಿ ಸಲ್ಲಿಸಲು ದಾಖಲಾತಿಗಳು:
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ
- ರೇಷನ್ ಕಾರ್ಡ್ ಸಂಖ್ಯೆ
- ಜನನ ಪ್ರಮಾಣ ಪತ್ರ ( 6 ವರ್ಷದ ಒಳಗೆ ಮಕ್ಕಳು ಇದ್ದರೆ ಮಾತ್ರ
Online ಅರ್ಜಿ ಸಲ್ಲಿಸುವ ವಿಧಾನ ( BPL ಕಾರ್ಡ್ ಅರ್ಜಿ ಸಲ್ಲಿಸಲು Secugen ಬಯೋಮೆಟ್ರಿಕ್ ನ ಅವಶ್ಯಕತೆ ಇದೆ)
ಹಂತ 1: ಇಲಾಖೆಯ ಅಧಿಕೃತ https://ahara.kar.nic.in/ ವೆಬ್‌ಸೈಟ್ ಭೇಟಿ ನೀಡಿ ಹೋಗಿ, ಇ-ಸೇವೆಗಳು’ (E Service) ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
ಹಂತ 1 : ಆನ್ಲೈನ್ ನಲ್ಲಿ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕು ಬಯಸುವವರು ಸರ್ಕಾರದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕಾಗುತ್ತೆ . ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ವೆಬ್ ಸೈಟ್ ಅನ್ನು ಓಪನ್ ಮಾಡ್ಕೊಳ್ಳಿ
ಹಂತ 2 : ನಂತರ ಅಲ್ಲಿ ಇ-ಸೇವೆಗಳು ಟ್ಯಾಬ್ ಅನ್ನು ಕ್ಲಿಕ್ ಮಾಡಿ
ಹಂತ 3 : ನಂತರ ಇ ಪಡಿತರ ಚೀಟಿ ಅನ್ನುವ ಒಪ್ಶನ್ ಮೇಲೆ ಕ್ಲಿಕ್ ಮಾಡಿ . ಅಲ್ಲಿ ಹೊಸ ಪಡಿತರ ಚೀಟಿ ಅಂಥ ಒಪ್ಶನ್ ಕಾಣುತ್ತೆ ಅದರ ಮೇಲೆ ಕ್ಲಿಕ್ ಮಾಡಿ .ಆಮೇಲೆ ಅಲಿ ನಿಮಗೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅಪ್ಲಿಕೇಶನ್ ಓಪನ್ ಆಗುತ್ತೆ .
ಹಂತ 4 : ಆಧಾರ್ ಕಾರ್ಡ್ ಲಿಂಕ್ ಇರುವ ಮೊಬೈಲ್ ನುಂನೇರ್ ಗೆ ಒಟಿಪಿ ಬಂದಿರುತ್ತೆ ಅದು ಹಾಕಿ .ಆಮೇಲೆ ಬಯೊಮೀಟ್ರಿಕ್ ಕೊಡಿ. ADD ಮಾಡಿ
ಹಂತ 5 : ಉಳಿದ ಸದಸ್ಯರು ADD ಮಾಡಿ ಆಮೇಲೆ ಫಿಂಗರ್ಪ್ರಿಂಟ್ ಕೊಟ್ಟು ADD ಮಾಡಿ. ನಂತರ ಫ್ಯಾಮಿಲಿ ಹೆಡ್ ಅನ್ನು ಸೆಲೆಕ್ಟ್ ಮಾಡಿ
ಹಂತ 6 : ಎಲ್ಲಾ ಸದಸ್ಯರು ಸೇರಿಸಿದ ಮೇಲೆ ಕೊನೇಯದಾಗಿ ವಿಳಾಸವನ್ನು ನಮೂದಿಸಿ ಆಮೇಲೆ ಕೊನೆಯಲ್ಲಿ ಅರ್ಜಿಯನ್ನು ಸಲ್ಲಿಸಿ.
ಹಂತ 7 :ಇಲ್ಲಿ ಜಿಲ್ಲೆ, ತಾಲೂಕು, ಸ್ವೀಕೃತಿ ಸಂಖ್ಯೆಯನ್ನು ಆಯ್ಕೆ ಮಾಡಿ ಮತ್ತು ಕರ್ನಾಟಕ ಬಿಪಿಎಲ್ ಪಡಿತರ ಚೀಟಿ ಹೊಸ ನೋಂದಣಿ ಫಾರ್ಮ್ ಅನ್ನು ಭರ್ತಿ ಮಾಡಲು ಮುಂದುವರಿಯಲು GO ಆಯ್ಕೆ ಮೇಲೆ ಕ್ಲಿಕ್ ಮಾಡಿ
ಹಂತ 8 :
ಅರ್ಜಿ ಸಲ್ಲಿಸುವ ವಿಧಾನ ಹಾಗೂ ತಿದ್ದುಪಡಿ ಮಾಡಿಸುವುದು ಎಲ್ಲಿ?:
ನೀವು ಮೇಲೆ ತಿಳಿಸಿರುವ ಎಲ್ಲಾ ದಾಖಲಾತಿಗಳೊಂದಿಗೆ ನಿಮ್ಮ ಹತ್ತಿರದ CSC ಸೆಂಟರ್ ಅಥವಾ ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರದಲ್ಲಿ ಅಥವಾ ಸೈಬರ್ ಸೆಂಟರ್ ಗಳಿಗೆ ಹೋಗಬಹುದು. ನಾವೇ ಸ್ವತಃ ಮೊಬೈಲ್ ಫೋನ್ ಮೂಲಕ ಅರ್ಜಿ ಸಲ್ಲಿಸಲು Secugen ಬಯೋಮೆಟ್ರಿಕ್ ನ ಅವಶ್ಯಕತೆ ಇದೆ. ಹಾಗಾಗಿ ಹತ್ತಿರದ ಸೈಬರ್ ಸೆಂಟರ್ ಕೇಂದ್ರ ಅಥವಾ ಗ್ರಾಮ ಒನ್ ಕೇಂದ್ರಗಳಿಗೆ ದಯವಿಟ್ಟು ಭೇಟಿ ನೀಡಿ ತಮ್ಮ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು.
ಈಗ ಸದ್ಯಕ್ಕೆ ಯಾವುದೇ ರೀತಿಯಾಗಿ ರೇಷನ್ ಕಾರ್ಡ್ ತಿದ್ದುಪಡಿ ಅಥವಾ ಹೊಸದಾಗಿ ಅರ್ಜಿ ಸಲ್ಲಿಸುವ ಅಪ್ಲಿಕೇಶನ್ ಇನ್ನು ಬಿಡುಗಡೆಯಾಗಿಲ್ಲ ಇದನ್ನು ನೀವೇನಾದರೂ ತಿದ್ದುಪಡಿ ಮಾಡಿಸಬೇಕಾದರೆ ತಮ್ಮ ತಾಲೂಕ್ ಆಫೀಸಿಗೆ ಹೋಗಿ ಅಲ್ಲಿ ನೀವು ಏನಾದರೂ ತಿದ್ದುಪಡಿಯನ್ನು ಮಾಡಿಸಿಕೊಳ್ಳಬಹುದು ಯಾವುದೇ ರೀತಿಯಾಗಿ ಕರ್ನಾಟಕವನ್ನು ಗ್ರಾಮವನ್ನು ಸಿ ಎಸಿ ಸೆಂಟರಗಳಲ್ಲಿ ಇನ್ನೂ ಅಪ್ಲಿಕೇಶನ್ ಬಿಟ್ಟಿಲ್ಲ
ಕರ್ನಾಟಕ ಪಡಿತರ ಚೀಟಿಗಾಗಿ ಸಹಾಯವಾಣಿ ಸಂಖ್ಯೆ (ಟೋಲ್ ಫ್ರೀ).
ಜನರು ಈಗ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆ, ವಿಕಾಸ ಸೌಧ, ಬೆಂಗಳೂರು – 560001 ಅನ್ನು ಸಂಪರ್ಕಿಸಬಹುದು. ಸಂಪರ್ಕ ವಿವರಗಳನ್ನು ಕೆಳಗೆ ನೀಡಲಾಗಿದೆ: –
ಸಹಾಯವಾಣಿ ಸಂಖ್ಯೆ – 1967
ಟೋಲ್ ಫ್ರೀ ಸಂಪರ್ಕ ಸಂಖ್ಯೆ. – 1800-425-9339
ಅಧಿಕೃತ ವೆಬ್‌ಸೈಟ್ – ahara.kar.nic.in
ನಿಮಗೆ ಸ್ಟೆಪ್ ಬೈ ಸ್ಟೆಪ್ ಬೇಕು ಅಂದರೆ ಸಂಪೂರ್ಣವಾಗಿ ಇದನ್ನೊಮ್ಮೆ ನೋಡಿ
Thans you........💓💓
- ಹಾಗೆ ನಮ್ಮ ಯುಟ್ಯೂಬ್ ಚಾನೆಲ್ ಫೇಸ್ಬುಕ್ ಟ್ವಿಟ್ಟರ್ ಇನ್ ವೆಬ್ ಸೈಟ್ ಗೆ ಭೇಟಿ ನೀಡಿ-------------------------------------------------------------------------------------------------------------------------ದಯವಿಟ್ಟು ಗಮನಿಸಿ: ಸಾರ್ವಜನಿಕ ಸೇವಾ ಯೋಜನೆಗಳು ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಹಾಕುತ್ತಿಲ್ಲ.**** ಲೇಖನ ಮುಕ್ತಾಯ ****ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲುನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆಸಬ್ ಸ್ಕ್ರೈಬ್ ಆಗಲು, Youtubeಲಿಂಕ್ ಮೇಲೆ ಕ್ಲಿಕ್ ಮಾಡಿ
.jpg)





No comments: